ಕನ್ನಡ ವಿಭಾಗ

ಪಿಇಎಸ್ ಐಎಎಮ್‌ಎಸ್ ಕಾಲೇಜಿನ ಕನ್ನಡ ವಿಭಾಗವು ಕಳೆದ ೧೬ ವರ್ಷಗಳಿಂದ ಕನ್ನಡ ಮನಸ್ಸುಗಳನ್ನು ಕಟ್ಟುವ ಕಾಯಕವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಸಾಹಿತ್ಯ, ಕಲೆ, ಪ್ರಾದೇಶಿಕ ಸಂಸ್ಕೃತಿ, ಪರಂಪರೆಗಳ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುತ್ತಾ ಅವರಲ್ಲಿ ಕನ್ನಡ ಪ್ರಜ್ಞೆಯನ್ನು ಬಿತ್ತುವ ಕೆಲಸವನ್ನು ಮಾಡಿಕೊಂಡು ಬರುವ ಜೊತೆಗೆ ವಿದ್ಯಾರ್ಥಿಗಳ ಬರವಣಿಗೆ ಕೌಶಲ್ಯವನ್ನು ವೃದ್ಧಿಸಲು ಪೂರಕವಾದ ಚಟುವಟಿಕೆಗಳನ್ನು ಕೂಡ ರೂಪಿಸುತ್ತಾ ಬಂದಿದೆ. ಪ್ರತೀ ವರ್ಷ ನವೆಂಬರ್ ತಿಂಗಳಲ್ಲಿ ಕನ್ನಡ ನುಡಿಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಲ್ಲದೆ ವಿವಿಧ ಸಾಹಿತ್ಯಿಕ ಸ್ಪರ್ಧೆಗಳನ್ನು ಅಭಿವ್ಯಕ್ತಿ ಸಾಹಿತ್ಯವೇದಿಕೆಯ ಮೂಲಕ ಆಯೋಜನೆಯನ್ನು ಮಾಡುವುದರ ಜೊತೆಗೆ ಅಂತರಕಾಲೇಜು, ಜಿಲ್ಲಾಮಟ್ಟ ಹಾಗೂ ರಾಜ್ಯಮಟ್ಟದ ಸಾಹಿತ್ಯಿಕ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ ಕಳುಹಿಸಿಕೊಡಲಾಗುತ್ತಿದೆ. ‘ದರ್ಪಣ’ ಎಂಬ ಭಿತ್ತಿಪತ್ರಿಕೆಯ ಮೂಲಕ ವಿದ್ಯಾರ್ಥಿಗಳಲ್ಲಿರುವ ಬರವಣಿಗೆಯ ಕೌಶಲ್ಯಕ್ಕೆ ವೇದಿಕೆಯನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ವಿಕಸನದ ಬೆಳವಣಿಗೆಗೆ ಪೂರಕವಾಗುವಂತೆ ಹಲವಾರು ಉಪನ್ಯಾಸಗಳು ಮತ್ತು ಕಾರ್ಯಕ್ರಮಗಳನ್ನು ಸಹ ರೂಪಿಸಿ ನಡೆಸಿಕೊಂಡು ಬರಲಾಗುತ್ತಿದೆ. ಈಗಾಗಲೇ ಬಹಳಷ್ಟು ವಿದ್ಯಾರ್ಥಿಗಳು ಕುವೆಂಪು ವಿಶ್ವವಿದ್ಯಾನಿಲಯದ ರ‍್ಯಾಂಕ್ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸುವ ಮೂಲಕ ವಿಭಾಗಕ್ಕೂ ಸಹ ಹೆಮ್ಮೆಯನ್ನು ತಂದಿದ್ದಾರೆ. ನುರಿತ ಅನುಭವೀ ಕನ್ನಡ ಅಧ್ಯಾಪಕರ ಬಳಗವು ಹಲವು ಕೃತಿಗಳನ್ನು ಹಾಗೂ ಲೇಖನಗಳನ್ನು ಪ್ರಕಟಿಸಿದ್ದು ಇದರ ಜೊತೆಗೆ ಕನ್ನಡಾಭಿಮಾನವನ್ನು ಮೂಡಿಸುವ ಕೈಂಕರ್ಯವನ್ನು ಜತನದಿಂದ ನಿರ್ವಹಿಸುತ್ತಾ ಬಂದಿದೆ.